HAIR THERAPY

*ಬಿಳಿಕೂದಲ ಚಿಂತೆ ಬೇಡ ಈ ಮನೆ ಮದ್ದು ಪಾಲಿಸಿ ಕೂದಲು ಕಪ್ಪಗೆ ಮಾಡ್ಕೊಳಿ !*


*ನೆಲ್ಲಿಕಾಯಿ :*
ಕಾದ ತೆಂಗಿನ ಎಣ್ಣೆಗೆ ಮೂರು ನಾಲ್ಕು ನೆಲ್ಲಿಕಾಯಿ ತುಂಡನ್ನು ಹಾಕಿ ಚೆನ್ನಾಗಿ ಕುದಿಸಿ ಆರಿದ ಮೇಲೆ ತಲೆಗೆ ಹಚ್ಚಿಕೊಳ್ಳಿ ನಂತರ ರಾತ್ರಿಪೂರ್ತಿ ಹಾಗೆ ಬಿಟ್ಟು ಸ್ನಾನ ಮಾಡಿ.
ವಿಟಮಿನ್ “ಸಿ’ ಅಧಿಕವಾಗಿದ್ದು ಮುಪ್ಪಿನ ಲಕ್ಷಣಗಳನ್ನು ಮುಂದೂಡುತ್ತದೆ.
ನೆಲ್ಲಿಕಾಯಿ ಜೊತೆ ಮೆಂತ್ಯೆಯನ್ನು ಬೆರೆಸಿ ಮಾಡಿದ ಪ್ಯಾಕ್ ಹಚ್ಚಿ
೧೦ ಒಣಗಿದ ನಲ್ಲಿಕಾಯಿ ತುಂಡು , ೬ ಚಮಚ ಮೆಂತ್ಯೆ ಪುಡಿ ಯನ್ನು ಪುಡಿ ಮಾಡಿಟ್ಟುಕೊಂಡು ಕಾದ ತೆಂಗಿನ ಎಣ್ಣೆಗೆ ಹಾಕಿ ಆರಿದ ಮೇಲೆ ತಲೆಗೆ ಹಚ್ಚಿಕೊಳ್ಳಿ ನಂತರ ರಾತ್ರಿಪೂರ್ತಿ ಹಾಗೆ ಬಿಟ್ಟು ಸ್ನಾನ ಮಾಡಿ.
ಸ್ನಾನಕ್ಕೆ ಸೀಗೆಕಾಯಿ ಪುಡಿ ಬಳಸಿ.

*ಕರಿಬೇವಿನ ಎಲೆ:*
ತೆಂಗಿನ ಎಣ್ಣೆಗೆ ಕರಿಬೇವಿನ ಎಲೆ ಹಾಕಿ ಚೆನ್ನಾಗಿ ಕುದಿಸಿ ತಣ್ಣಗಾದ ಮೇಲೆ ಅದನ್ನು ಕೂದಲಿಗೆ ಮಸಾಜ್ ಮಾಡಿ. 30-45 ನಿಮಿಷ ಬಿಟ್ಟು ತೊಳೆಯಿರಿ.

*ತೆಂಗಿನೆಣ್ಣೆ-ನಿಂಬೆ ರಸ :* ತೆಂಗಿನ ಎಣ್ಣೆಗೆ ನಿಂಬೆ ರಸ ಬೆರೆಸಿ ಕೂದಲು ಹಾಗೂ ತಲೆಗೆ ಹಚ್ಚಿಕೊಳ್ಳಿ. ಮಸಾಜ್ ಮಾಡಿ ಒಂದು ಗಂಟೆ ನಂತರ ತಲೆ ಸ್ನಾನ ಮಾಡಿ.
ತೆಂಗಿನ ಎಣ್ಣೆ ಕಪ್ಪು ಕೂದಲ ಬೆಳವಣಿಗೆಗೆ ಸಹಕಾರಿ.

*ನಿಂಬೆರಸ ಹಾಗೂ ಬಾದಾಮಿ ತೈಲ:*
10 ಚಮಚ ಬಾದಾಮಿ ಎಣ್ಣೆ, 10 ಚಮಚ ನಿಂಬೆರಸ ಬೆರೆಸಿ ಚೆನ್ನಾಗಿ ಕಲಕಬೇಕು ನಂತರ ಹಚ್ಚಿ ಹಾಗೆಯೇ ಬಿಡಬೇಕು.

*ಬ್ಲ್ಯಾಕ್ಟೀ :*
10 ಚಮಚ ಬ್ಲ್ಯಾಕ್ಟೀ ಪುಡಿ ಹಾಗೂ ಉಪ್ಪು 1/4 ಚಮಚ ತೆಗೆದುಕೊಂಡು ಸ್ವಲ್ಪ ನೀರು ಬೆರೆಸಿ 2 ನಿಮಿಷ ಕುದಿಸಬೇಕು ನಂತರ ಹಚ್ಚಿ ಹಾಗೆಯೇ ಬಿಡಬೇಕು ವಾರದಲ್ಲಿ 3 -4 ಬಾರಿ ಮಾಡಬೇಕು.

*ಈರುಳ್ಳಿ ರಸ:*
ಈರುಳ್ಳಿ ರಸ ಅರೆಕಾಲಿಕ ಕೂದಲು ಹಣ್ಣಾಗುವುದನ್ನು ತಪ್ಪಿಸುತ್ತದೆ. ತಲೆ ಬೋಳಾಗುವುದರಿಂದಲೂ ಮುಕ್ತಿ ನೀಡುತ್ತದೆ. ಒಂದು ಗಾಜಿನ ಪಾತ್ರೆಯಲ್ಲಿ ಈರುಳ್ಳಿ ರಸ ಹಾಗೂ ನಿಂಬೆ ರಸವನ್ನು ಬೆರೆಸಿ. ಅದನ್ನು ತಲೆ ಹಾಗೂ ಕೂದಲಿಗೆ ಚೆನ್ನಾಗಿ ಹಚ್ಚಿ. ಅರ್ಧ ಗಂಟೆ ನಂತರ ತೊಳೆಯಿರಿ.
ಕೂದಲು ಬಿಳಿಯಾಗಲು ಅದರಲ್ಲಿರುವ ಹೈಡ್ರೋಜನ್ ಪೆರಾಕ್ಸೆ„ಡ್ ಹಾಗೂ ಆ್ಯಂಟಿ ಆಕ್ಸಿಡೆಂಟ್ಗಳ ಕೊರತೆ ಕಾರಣ ಎಂದು ತಿಳಿದುಬಂದಿದೆ
2 ಈರುಳ್ಳಿ ಹಾಗೂ ೨ ನಿಂಬೆ ಹಣ್ಣಿನಿಂದ ರಸ ತೆಗೆದು ಚೆನ್ನಾಗಿ ಹಚ್ಚಿ 1 /2 ಘಂಟೆ ನಂತರ ತೊಳೆಯಬೇಕು ವಾರಕ್ಕೆ 3 -4 ಬಾರಿ ಮಾಡಬೇಕು.

*ಗೋರಂಟಿ ಎಲೆ:*
ಗೋರಂಟಿ ಎಲೆಗಳನ್ನು ಬಳಸಬಹದು. ಗೋರಂಟಿ ಎಲೆಗಳನ್ನು ರುಬ್ಬಿ, ಅದಕ್ಕೆ ಮೂರು ಚಮಚ ನೆಲ್ಲಿಕಾಯಿ ಪುಡಿ ಬೆರೆಸಿ ಆ ಮಿಶ್ರಣವನ್ನು ತಲೆಗೆ ಹಚ್ಚಿಕೊಳ್ಳಿ.

*ಕಪ್ಪು ಎಳ್ಳು:*
ಪ್ರತಿದಿನ ಕರಿ ಎಳ್ಳಿನ ಎಣ್ಣೆಯನ್ನು ಕೂದಲಿಗೆ ಹಚ್ಚುತ್ತ ಬಂದರೆ ಮೂರು ತಿಂಗಳಲ್ಲಿ ಪರಿಣಾಮ ನೋಡಬಹುದಾಗಿದೆ.

*ಸೋರೆಕಾಯಿ ರಸ :*
ಸೋರೆ ಕಾಯಿ ರಸ ಕೂಡ ಕೂದಲಿಗೆ ಒಳ್ಳೆಯದು. ಕೂದಲು ಹಣ್ಣಾಗುವುದನ್ನು ಇದು ತಡೆಯುತ್ತದೆ.

*ಹೀರೆಕಾಯಿ ತೈಲ:*
ಹೀರೆಕಾಯಿಯ ಸಣ್ಣ ತುಂಡುಗಳು 1 ಕಪ್ ತೆಗೆದುಕೊಂಡು, 1 ಕಪ್ ತೆಂಗಿನೆಣ್ಣೆಯಲ್ಲಿ ಹಾಕಿ 15 ನಿಮಿಷ ಸಣ್ಣ ಉರಿಯಲ್ಲಿ ಕುದಿಸಬೇಕು. ಆರಿದ ಬಳಿಕ ಸೋಸಿ ನಿತ್ಯ ಈ ಎಣ್ಣೆಯನ್ನು ತಲೆಯ ಕೂದಲಿಗೆ ಹಚ್ಚಬೇಕು.
******************************************************************

Comments