Posts

QUIZ

  4.*ಜಾಣ ಜಾಣೆಯರಿಗೆ ಸವಾಲು. *ಣೆ* *ಅಕ್ಷರದಿಂದ ಕೊನೆಯಾಗುವ ಪದಗಳನ್ನು ಬರೆಯಿರಿ.ಉ:ಆರೋಗ್ಯ ಪರಿಶೀಲನೆ= ತಪಾಸಣೆ* ೧.ದೇವರನ್ನು ನೆನೆಯುವುದು ೨.ಕುಳಿತುಕೊಳ್ಳುವ ಹಲಗೆ ೩.ಕಷ್ಟ ಪಡುವಿಕೆ ೪.ಉಪವಾಸದ ನಂತರ ಮಾಡುವುದು ೫.ಸಾಮಾಗ್ರಿಗಳು ೬.ದಯೆ ೭.ಹಾಸಿಗೆಯಲ್ಲಿ ಕಚ್ಚುವ ಕೀಟ ೮.ಹೊಲದಲ್ಲಿ ಕಲ್ಲು ಹೊಡೆಯಲು ಬಳಸುವುದು ೯.ಮದುವೆಯಲ್ಲಿ ವಧುವರ ಆಡುವ ಆಟ ೧೦.ಎಲ್ಲರಿಗೂ ಊಟ ಹಾಕುವುದು ೧೧.ಮಾತುಕತೆ ೧೨.ಡಿಕ್ಕಿ ಹೊಡೆಯುವುದು ೧೩.ತೀರ್ಥ ಸಿಂಪಡಿಸುವುದು ೧೪.ಕೊಠಡಿ ೧೫.ಚತುರೆ ೧೬.ನಿರ್ವಹಿಸುವುದು ೧೭.ತೀರ್ಥ ಕೊಡುವ ಚಮಚ ೧೮.ಜವಾಬ್ದಾರಿ ೧೯.ದೇವರಿಗೆ ಸುತ್ತುವುದು. ೨೦.ಮುಷ್ಕರದಲ್ಲಿ ಕೂಗುವುದು. ***********************************************************************  UTTARA:  ೧.ಸ್ಮರಣೆ ೨.ಮಣೆ ೩.ಬವಣೆ ೪.ಪಾರಣೆ ೫.ಸಲಕರಣೆ ೬.ಕರುಣೆ ೭.ತಿಗಣೆ ೮.ಕವಣೆ ೯.ಉರುಟಣೆ ೧೦.ಸಮಾರಾಧನೆ ೧೧.ಸಂಭಾಷಣೆ ೧೨.ಘರ್ಷಣೆ ೧೩.ಪ್ರೋಕ್ಷಣೆ ೧೪.ಕೋಣೆ ೧೫.ಜಾಣೆ ೧೬.ನಿರ್ವಹಣೆ ೧೭.ಉದ್ಧರಣೆ ೧೮.ಹೊಣೆ ೧೯.ಪ್ರದಕ್ಷಿಣೆ ೨೦.ಘೋಷಣೆ ******************************************************************* 7.ಜಾಣ , ಜಾಣೆಯರಿಗೆ ಮತ್ತೊಂದು ಸವಾಲು... ಈ ಪದಗಳನ್ನು ಹುಡುಕಿ, ಮೂರು ಅಕ್ಷರಗಳು, "ಗೆ" ಅಕ್ಷರ...

PROVERBS

ನಾಲ್ಕು ಅಮೂಲ್ಯ ರತ್ನಗಳನ್ನು ನಿಮಗಾಗಿ ಕಳುಹಿಸುವೆ : ಇವುಗಳಿಂದ ನೀವು ಖಂಡಿತವಾಗಿಯೂ ಧನಿಕರಾಗುವಿರೆಂಬ  ನಂಬಿಕೆ ನನಗಿದ. ಮೊದಲ ರತ್ನ : ಕ್ಷಮೆ ನಿಮಗೆ ಯಾರೇ ಏನೇ ಹೇಳಲಿ, ಅವರ ಮಾತನ್ನು ಎಂದಿಗೂ ಮನಸ್ಸಿಗೆ ತೆಗೆದುಕೊಳ್ಳಬಾರದು ಮತ್ತು ಅದಕ್ಕಾಗಿ ಎಂದಿಗೂ ಅವರ ಮೇಲೆ ಸೇಡಿನ ಭಾವನೆ ಇಟ್ಟುಕೊಳ್ಳಬಾರದು. ಅವರನ್ನು ಕ್ಷಮಿಸಿಬಿಡಬೇಕು. ಎರಡನೇ ರತ್ನ : ಜಾಣ ಮರೆವು ನಾವು ಇನ್ನೊಬ್ಬರಿಗೆ ಮಾಡಿದ ಉಪಕಾರವನ್ನು ಮರೆತುಬಿಡಬೇಕು. ಎಂದಿಗೂ ಆ ಉಪಕಾರಕ್ಕೆ ಪ್ರತಿಫಲವನ್ನು ಅಪೇಕ್ಷಿಸದೇ ಇರುವುದು. ಮೂರನೇ ರತ್ನ : ವಿಶ್ವಾಸ ಸದಾ ನಮ್ಮ ಪ್ರಯತ್ನ ಮತ್ತು ಆ ಪರಮಪುರುಷ ಪರಮಾತ್ಮನಲ್ಲಿ ಅಚಲವಿಶ್ವಾಸವನ್ನಿಡುವುದು. ಇದೇ ಸಫಲತೆಯ ಸೂತ್. ನಾಲ್ಕನೇ ರತ್ನ : ವೈರಾಗ್ಯ  ಜಾತಸ್ಯ ಮರಣಂ ಧ್ರುವಂ - ಹುಟ್ಟಿದ ಪ್ರತಿಯೊಬ್ಬನೂ ಸಾಯಲೇ ಬೇಕು ಎನ್ನುವ ಮಾತನ್ನು ಯಾವಾಗಲೂ ನೆನಪಿಡಬೇಕು. ಅದರಂತೆಯೇ ಸಮಯ ವ್ಯರ್ಥ ಮಾಡದೇ ಜೀವನದ ಆನಂದದ ಅನುಭೂತಿಯನ್ನು ಪಡೆಯುತ್ತಾ ವರ್ತಮಾನದಲ್ಲಿ ಬದುಕುವುದು. ಇದೇ ಜೀವನದ ನಿಜವಾದ ಸಾರ್ಥಕ್ಯ.. ****************************************************************** ಹುಟ್ಟು...ನಾವು ಕೇಳದೇ ಸಿಗುವ ವರ(ಶಾಪ). ಸಾವು....ನಾವು ಹೇಳದೇ ಹೋಗುವ ಜಾಗ. ಬಾಲ್ಯ....ಮೈಮರೆತು ಆಡುವ ಸ್ವರ್ಗ. ಯೌವನ...ಅರಿವಿದ್ದರೂ ಅರಿಯದ ಮಾಯೆ. ಮುಪ್ಪು....ಕಡೆಯ ಆಟ. ಸ್ನೇಹ......

SAVI NUDIGALU

ಈ ವಿಷಯಗಳನ್ನು ಸಾಧ್ಯವಾದಷ್ಟೂ ಬೇಕಾದವರೊಡನೆ ಹಂಚಿಕೊಳ್ಳುತ್ತಿರಿ. 1.ಸ್ನೇಹಿತರೆ, ಈ 'ತಾಯಿಯ ತ್ಯಾಗ'ದ ದೃಷ್ಟಾ೦ತವನ್ನು ಓದಿದ ಮೇಲೆ, ಅವಳಿಗಾಗಿ ನಿಮ್ಮ ಮುದ್ದಾದ ಮುಖದಲ್ಲಿ ಕಣ್ಣಂಚಿನಿಂದ ಒಂದೆರಡು ಮುತ್ತುಗಳು ನಿಮ್ಮ ಕೆನ್ನೆಗೆ ಜಾರೇ-ಜಾರುತ್ತವೆ.!!! ಒಂದೂರಿನಲ್ಲಿ ಒಕ್ಕಣ್ಣ (ಒಂದೇ ಕಣ್ಣು ಇರುವ)😉 ವಿಧವಾ ಸ್ತ್ರೀಯೊಬ್ಬಳು ತನ್ನ ಪುಟ್ಟ 🙇🏻ಮಗುವಿನೊಂದಿಗೆ ವಾಸವಾಗಿದ್ದಳು. ಪ್ರತಿ ದಿನ ಮುಂಜಾನೆ ಎದ್ದು ಅಕ್ಕಪಕ್ಕದ ಮನೆಗಳಲ್ಲಿ ಮುಸುರೆ ತಿಕ್ಕಿ ತನ್ನ ಮಗುವಿನ ಭವಿಷ್ಯ ಕಟ್ಟಲು ಪ್ರಯತ್ನಿಸುತ್ತಿದ್ದಳು. ಹೀಗೆ ಕಾಲಚಕ್ರ ಉರುಳುತಿತ್ತು. ಮಗು ಬೆಳೆದು ಪ್ರೌಡಾವಸ್ಥೆ ತಲುಪಿತು.ಮಗು ತಾಯಿಯ ಬಳಿ “ಅಮ್ಮ ನಿನ್ನ ಒಂದು ಕಣ್ಣಿಗೆ ಏನಾಯಿತು?” ಕೇಳಿದಾಗ, ಏನೋ ಒಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಿದ್ದಳು. ಆ ತಾಯಿಗೆ ತನ್ನ ಮಗ ತಾನು ಪಟ್ಟ ಕಷ್ಟ ಅವನು ಪಡದೇ, ಜೀವನದಲ್ಲಿ ಒಬ್ಬ ಸ್ಥಿತಿವಂತನಾಗಬೇಕೆಂಬ ಹಂಬಲ ಮನಸ್ಸೊಳಗೆ ತಳವೂರಿತ್ತು. ಅದಕ್ಕಾಗಿ ಮಗನಿಗೆ ಯಾವುದಕ್ಕೂ ಕೊರತೆ ಬರದಂತೆ ನೋಡಿಕೊಳ್ಳುತ್ತಿದ್ದಳು. ಮಗು ಹಠ ಮಾಡಿತೆಂದು ಅವರಿವರ ಬಳಿ ಸಾಲ ಮಾಡಿ ಸೈಕಲ್🚲 ಕೊಡಿಸಿದ್ದೂ ಆಯ್ತು. ಹೀಗಿರುವಾಗ ಒಂದು ದಿನ ತಾಯಿ ತನ್ನ ಮಗನ ಶಾಲೆಗೆ ತೆರಳಿ ಮಗುವಿನ ವಿಧ್ಯಾಬ್ಯಾಸದ ಕುರಿತು ಶಿಕ್ಷಕರ ಜೊತೆ ಮಾತಾಡಿ ಬಂದಳು. ಸಂಜೆ ಮನೆಗೆ ಬಂದ ಮಗ ಜೋರಾಗಿ ಕಿರುಚಿ ...